Episodes

All Episodes

15 hours ago

6 min

We live in a world where our minds are constantly busy, yet our bodies often remain still. Hours pass at desks, in meetings and in front of screens, leaving us physically tired despite barely moving.
In this episode of The Simplified Scholar, Dr. Brian Jeevan Fernandes explores the importance of everyday movement through the lens of Ikigai : the Japanese philosophy of finding meaning and purpose in life.
We also explore why we should stop treating our bodies like machines, how movement supports our ability to participate in the things we love, and why a sustainable routine matters more than an impressive one.
Because living well is not simply about adding years to life. It is also about staying involved in the things that make life meaningful.
The Simplified Scholar — Big Ideas. Made Simple.

15 hours ago

6 min

15 hours ago

6 min

ನಮ್ಮ ಮನಸ್ಸು ದಿನವಿಡೀ ನೂರಾರು ಕೆಲಸಗಳಲ್ಲಿ ನಿರತವಾಗಿರುತ್ತದೆ. ಆದರೆ ನಮ್ಮ ದೇಹ ಮಾತ್ರ ಬಹಳ ಹೊತ್ತು ಒಂದೇ ಜಾಗದಲ್ಲಿ ಕುಳಿತಿರುತ್ತದೆ. ಕೆಲಸ, ಸಭೆಗಳು, ಕಂಪ್ಯೂಟರ್ ಮತ್ತು ಮೊಬೈಲ್ ಪರದೆಗಳ ನಡುವೆ ದೈಹಿಕ ಚಲನೆಗೆ ಅವಕಾಶವೇ ಕಡಿಮೆಯಾಗುತ್ತಿದೆ.
ನಮ್ಮ ದೇಹವನ್ನು ಯಂತ್ರದಂತೆ ನೋಡದೆ, ಅದಕ್ಕೆ ಅಗತ್ಯವಾದ ಚಲನೆ, ವಿಶ್ರಾಂತಿ ಮತ್ತು ಕಾಳಜಿಯನ್ನು ನೀಡುವುದೇಕೆ ಮುಖ್ಯ? ಸಣ್ಣ ಸಣ್ಣ ಚಟುವಟಿಕೆಗಳು ನಮ್ಮ ಬದುಕನ್ನು ಹೇಗೆ ಉತ್ತಮಗೊಳಿಸಬಹುದು?
ಈ ಸಂಚಿಕೆಯಲ್ಲಿ ಈ ವಿಚಾರಗಳನ್ನು ಆಲೋಚಿಸೋಣ.
ನೆನಪಿಡಿ, ಬದುಕುವುದು ಎಂದರೆ ಕೇವಲ ದಿನಗಳನ್ನು ಕಳೆಯುವುದಲ್ಲ. ಬದುಕಿಗೆ ಅರ್ಥ ನೀಡುವ ಕೆಲಸಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದೂ ಹೌದು.
ದಿ ಸಿಂಪ್ಲಿಫೈಡ್ ಸ್ಕಾಲರ್ — ದೊಡ್ಡ ವಿಚಾರಗಳು, ಸರಳವಾಗಿ.
 

15 hours ago

6 min

Nov 1, 2026

6 min

Are we eating simply to satisfy our hunger, or are we eating to nourish our lives?
Food is one of life's simplest pleasures, yet how often do we stop to think about what, why, and how we eat?
In this episode of The Simplified Scholar, we explore the quiet wisdom of mindful eating and discover why a healthy relationship with food goes far beyond counting calories or following strict diets.
Inspired by the Japanese philosophy of living well, particularly the wisdom associated with Okinawa, we reflect on the importance of moderation, gratitude, balance and listening to our body's natural signals.
From eating slowly and recognising when we are comfortably full to appreciating simple meals and making thoughtful food choices, this episode invites us to rediscover the art of eating well.
Because food is not merely fuel for the body. It is an everyday opportunity to care for ourselves and celebrate life.
Sometimes, living well begins with something as simple as the next meal.
Tune in, reflect, and discover the quiet wisdom of eating for life, not just for hunger.

Nov 1, 2026

6 min

Nov 1, 2026

6 min

ನಾವು ಊಟ ಮಾಡುವುದು ಕೇವಲ ಹಸಿವು ನೀಗಿಸಿಕೊಳ್ಳುವುದಕ್ಕಾಗಿಯೇ? ಅಥವಾ ನಮ್ಮ ಬದುಕನ್ನು ಪೋಷಿಸುವುದಕ್ಕಾಗಿಯೇ?
ಆಹಾರ ನಮ್ಮ ಬದುಕಿನ ಅತ್ಯಂತ ಸರಳವಾದ ಸಂತೋಷಗಳಲ್ಲಿ ಒಂದು. ಆದರೆ ನಾವು ಏನು ತಿನ್ನುತ್ತೇವೆ, ಏಕೆ ತಿನ್ನುತ್ತೇವೆ ಮತ್ತು ಹೇಗೆ ತಿನ್ನುತ್ತೇವೆ ಎಂಬುದರ ಬಗ್ಗೆ ಎಷ್ಟು ಬಾರಿ ಯೋಚಿಸುತ್ತೇವೆ?
The Simplified Scholar ನ ಈ ಸಂಚಿಕೆಯಲ್ಲಿ, ಆಹಾರದೊಂದಿಗೆ ನಮ್ಮ ಸಂಬಂಧವನ್ನು ಮತ್ತೊಮ್ಮೆ ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡೋಣ.
ಜಪಾನಿನ ಜೀವನಶೈಲಿ, ವಿಶೇಷವಾಗಿ ಒಕಿನಾವಾ ಜನರ ಬದುಕಿನಲ್ಲಿರುವ ಸರಳವಾದ ಆಹಾರ ಪದ್ಧತಿ ಮತ್ತು ಜೀವನದ ಬಗೆಗಿನ ತಿಳಿವಳಿಕೆಯಿಂದ ಪ್ರೇರಣೆ ಪಡೆದು, ಮಿತವಾಗಿ ತಿನ್ನುವುದು, ಆಹಾರವನ್ನು ಕೃತಜ್ಞತೆಯಿಂದ ಸವಿಯುವುದು ಮತ್ತು ದೇಹದ ಸಹಜ ಸಂಕೇತಗಳಿಗೆ ಕಿವಿಗೊಡುವುದರ ಮಹತ್ವವನ್ನು ಅರಿಯೋಣ.
ನಿಧಾನವಾಗಿ ಊಟ ಮಾಡುವುದು, ಹೊಟ್ಟೆ ತುಂಬಿದಾಗ ಅದನ್ನು ಗುರುತಿಸುವುದು, ಸರಳ ಆಹಾರದಲ್ಲಿಯೂ ಸಂತೋಷ ಕಂಡುಕೊಳ್ಳುವುದು : ಇವೆಲ್ಲವೂ ಆರೋಗ್ಯಕರ ಬದುಕಿನ ಸಣ್ಣ ಆದರೆ ಅರ್ಥಪೂರ್ಣ ಹೆಜ್ಜೆಗಳು.
ಆಹಾರವೆಂದರೆ ಕೇವಲ ದೇಹಕ್ಕೆ ಶಕ್ತಿ ನೀಡುವ ವಸ್ತುವಲ್ಲ. ಅದು ನಮ್ಮನ್ನು ನಾವು ಪ್ರೀತಿಯಿಂದ ಕಾಳಜಿ ವಹಿಸಿಕೊಳ್ಳುವ ಪ್ರತಿದಿನದ ಒಂದು ಸುಂದರ ಅವಕಾಶ.
ಏಕೆಂದರೆ, ಒಳ್ಳೆಯ ಬದುಕು ಕೆಲವೊಮ್ಮೆ ನಮ್ಮ ಮುಂದಿರುವ ಒಂದು ಸರಳ ಊಟದಿಂದಲೇ ಆರಂಭವಾಗುತ್ತದೆ.
ಬನ್ನಿ, ಹಸಿವು ನೀಗಿಸುವುದಷ್ಟೇ ಅಲ್ಲ, ಬದುಕನ್ನೂ ಪೋಷಿಸುವ ಆಹಾರದ ಮೌಲ್ಯವನ್ನು ಅರಿಯೋಣ.

Nov 1, 2026

6 min

Oct 24, 2026

10 min

The Art of Growing Older Without Growing Old | The Simplified Scholar — Episode 6
What if growing older did not necessarily mean losing your enthusiasm for life?
In this sixth episode of The Simplified Scholar, we return to the wisdom of Ikigai and explore how we can continue to live with purpose, curiosity, connection, and joy as the years pass.
Inspired by the lives and traditions of Japan’s long-lived communities, this episode invites us to look beyond the number of candles on our birthday cake. A meaningful life is not simply about adding years to our life; it is also about bringing life to our years.
We explore the importance of staying active, nurturing relationships, enjoying simple pleasures, maintaining a sense of purpose, and remaining curious about the world around us.
Because perhaps the real secret is not to fight the passage of time, but to grow through it without allowing our spirit to grow tired.
In this episode, we reflect on:
Why purpose matters at every stage of life.
How everyday movement and simple habits can support well-being.
Why meaningful relationships and belonging matter.
How curiosity and small pleasures keep life interesting.
Practical ways to bring more vitality and meaning into everyday living.
You do not have to be young to begin something new. You do not have to wait for retirement to enjoy life. And you do not need to make dramatic changes to begin living more meaningfully.
Sometimes, the art of living well begins with one small choice today.
🎧 Listen, reflect, and discover your own way of growing older without growing old.
The Simplified Scholar — Big Ideas. Made Simple.
Available in English and Kannada.
#Ikigai #HealthyAgeing #PurposefulLiving #Longevity #TheSimplifiedScholar

Oct 24, 2026

10 min

Oct 24, 2026

11 min

ವಯಸ್ಸಾಗಲಿ, ಬದುಕಿನ ಉತ್ಸಾಹ ಕುಂದದಿರಲಿ | ದಿ ಸಿಂಪ್ಲಿಫೈಡ್ ಸ್ಕಾಲರ್ — ಸಂಚಿಕೆ 6
ವಯಸ್ಸಾಗುವುದು ಸಹಜ. ಆದರೆ ವಯಸ್ಸಿನೊಂದಿಗೆ ಬದುಕಿನ ಮೇಲಿನ ಆಸಕ್ತಿ, ಕುತೂಹಲ ಮತ್ತು ಉತ್ಸಾಹವೂ ಕಡಿಮೆಯಾಗಬೇಕೇ?
ದಿ ಸಿಂಪ್ಲಿಫೈಡ್ ಸ್ಕಾಲರ್ ಇಕಿಗೈ ಸರಣಿಯ ಆರನೇ ಸಂಚಿಕೆಯಲ್ಲಿ, ಜಪಾನಿನ ದೀರ್ಘಾಯುಷಿ ಸಮುದಾಯಗಳ ಜೀವನಶೈಲಿಯಿಂದ ಸ್ಫೂರ್ತಿ ಪಡೆದು, ವಯಸ್ಸು ಹೆಚ್ಚಾದರೂ ಬದುಕನ್ನು ಪ್ರೀತಿಸುವ ಮನಸ್ಸನ್ನು ಹೇಗೆ ಜೀವಂತವಾಗಿರಿಸಿಕೊಳ್ಳಬಹುದು ಎಂಬುದನ್ನು ಅನ್ವೇಷಿಸೋಣ.
ಬದುಕು ಎಂದರೆ ಕೇವಲ ವರ್ಷಗಳನ್ನು ಕಳೆಯುವುದಲ್ಲ; ಪ್ರತಿಯೊಂದು ವರ್ಷಕ್ಕೂ ಅರ್ಥ ತುಂಬುವುದೂ ಹೌದು. ನಮ್ಮ ದಿನಗಳಿಗೆ ಉದ್ದೇಶವಿರಲಿ, ಹೆಜ್ಜೆಗಳಲ್ಲಿ ಚೈತನ್ಯವಿರಲಿ, ಸಂಬಂಧಗಳಲ್ಲಿ ಆತ್ಮೀಯತೆಯಿರಲಿ, ಸಣ್ಣ ಸಂಗತಿಗಳಲ್ಲಿಯೂ ಸಂತೋಷವನ್ನು ಕಾಣುವ ಮನಸ್ಸಿರಲಿ.
ಈ ಸಂಚಿಕೆಯಲ್ಲಿ ನಾವು ಚಿಂತಿಸುವ ಕೆಲವು ಸಂಗತಿಗಳು:
ಬದುಕಿನ ಪ್ರತಿಯೊಂದು ಹಂತದಲ್ಲಿಯೂ ಒಂದು ಉದ್ದೇಶವನ್ನು ಹೊಂದಿರುವುದರ ಮಹತ್ವ.
ದೈನಂದಿನ ಚಟುವಟಿಕೆಗಳು ಮತ್ತು ಸರಳ ಜೀವನಶೈಲಿಯ ಪಾತ್ರ.
ಆತ್ಮೀಯ ಸಂಬಂಧಗಳು ಮತ್ತು ಒಡನಾಟ ನೀಡುವ ನೆಮ್ಮದಿ.
ಹೊಸದನ್ನು ಕಲಿಯುವ ಕುತೂಹಲ ಮತ್ತು ಸಣ್ಣ ಸಂತೋಷಗಳ ಮೌಲ್ಯ.
ಬದುಕಿಗೆ ಹೊಸ ಚೈತನ್ಯ ತುಂಬುವ ಸರಳ ಅಭ್ಯಾಸಗಳು.
ಹೊಸದನ್ನು ಆರಂಭಿಸಲು ನೀವು ಯುವಕರಾಗಿರಬೇಕಿಲ್ಲ. ಬದುಕನ್ನು ಆಸ್ವಾದಿಸಲು ನಿವೃತ್ತಿಯವರೆಗೆ ಕಾಯಬೇಕಿಲ್ಲ. ಬದುಕಿನಲ್ಲಿ ಬದಲಾವಣೆ ತರಲು ದೊಡ್ಡ ಹೆಜ್ಜೆಗಳನ್ನೇ ಇಡಬೇಕಿಲ್ಲ.
ಕೆಲವೊಮ್ಮೆ, ಬದುಕನ್ನು ಇನ್ನಷ್ಟು ಅರ್ಥಪೂರ್ಣವಾಗಿಸುವುದು ಇಂದಿನ ಒಂದು ಸಣ್ಣ ನಿರ್ಧಾರದಿಂದಲೇ ಆರಂಭವಾಗುತ್ತದೆ.
ವಯಸ್ಸು ನಮ್ಮ ದೇಹದಲ್ಲಿ ಕಾಣಿಸಿಕೊಳ್ಳಬಹುದು; ಆದರೆ ಬದುಕಿನ ಮೇಲಿನ ಪ್ರೀತಿ, ಕಲಿಯುವ ಹಂಬಲ ಮತ್ತು ಮನದ ಉತ್ಸಾಹಕ್ಕೆ ವಯಸ್ಸಿನ ಮಿತಿಯೇಕೆ?
ಕೇಳಿ, ಆಲೋಚಿಸಿ, ನಿಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಿ.
ದಿ ಸಿಂಪ್ಲಿಫೈಡ್ ಸ್ಕಾಲರ್ — ದೊಡ್ಡ ವಿಚಾರಗಳು, ಸರಳವಾಗಿ.
ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಲಭ್ಯ.
#ಇಕಿಗೈ #ಅರ್ಥಪೂರ್ಣಬದುಕು #ದೀರ್ಘಾಯುಷ್ಯ #ಜೀವನದಉತ್ಸಾಹ #TheSimplifiedScholar

Oct 24, 2026

11 min

Oct 18, 2026

15 min

What if your attention were a  lunch plate (thali)?Imagine your attention as a plate with limited space. Every thought, notification, worry, conversation, and ambition asks for a place on it. But if we try to accommodate everything, do we leave enough room for what truly matters?In Episode 5 of The Simplified Scholar, Dr. Brian Jeevan Fernandes explores the importance of choosing where we direct our attention. Through a familiar everyday metaphor, we reflect on distraction, priorities, meaningful living, and the small choices that shape our days.Perhaps a fulfilling life is not about giving everything our attention, but about giving the right things the attention they deserve.Join me as we simplify this powerful idea and discover how to make room for what matters most.The Simplified Scholar — Big Ideas. Made Simple.

Oct 18, 2026

15 min

Oct 18, 2026

17 min

ನಿಮ್ಮ ಗಮನವನ್ನು ಒಂದು ಊಟದ ತಟ್ಟೆಯಂತೆ ಕಲ್ಪಿಸಿಕೊಳ್ಳಿ.ಆ ತಟ್ಟೆಯಲ್ಲಿ ಪ್ರತಿಯೊಂದು ಆಲೋಚನೆಗೂ, ಚಿಂತೆಯಿಗೂ, ಮೊಬೈಲ್ ಸೂಚನೆಗೂ, ಆಸೆಗೂ ಮತ್ತು ಜವಾಬ್ದಾರಿಗೂ ಜಾಗ ಬೇಕು. ಆದರೆ ಎಲ್ಲವನ್ನೂ ಒಂದೇ ತಟ್ಟೆಯಲ್ಲಿ ತುಂಬಿಸಲು ಪ್ರಯತ್ನಿಸಿದರೆ, ನಿಜವಾಗಿಯೂ ಮುಖ್ಯವಾದುದಕ್ಕೆ ಜಾಗ ಉಳಿಯುತ್ತದೆಯೇ?The Simplified Scholarನ ಐದನೇ ಸಂಚಿಕೆಯಲ್ಲಿ, ಡಾ. ಬ್ರಿಯಾನ್ ಜೀವನ್ ಫೆರ್ನಾಂಡಿಸ್ ಅವರು ನಮ್ಮ ಗಮನವನ್ನು ಎಲ್ಲಿ ಮತ್ತು ಹೇಗೆ ಬಳಸುತ್ತೇವೆ ಎಂಬುದರ ಮಹತ್ವವನ್ನು ಸರಳವಾಗಿ ಅನಾವರಣಗೊಳಿಸುತ್ತಾರೆ.ದಿನನಿತ್ಯದ ಪರಿಚಿತ ಅನುಭವದ ಮೂಲಕ, ನಮ್ಮನ್ನು ಚಂಚಲಗೊಳಿಸುವ ಸಂಗತಿಗಳು, ನಮ್ಮ ಆದ್ಯತೆಗಳು ಮತ್ತು ಬದುಕಿಗೆ ನಿಜವಾದ ಅರ್ಥ ನೀಡುವ ವಿಷಯಗಳ ಕುರಿತು ಚಿಂತಿಸಲು ಈ ಸಂಚಿಕೆ ನಿಮ್ಮನ್ನು ಆಹ್ವಾನಿಸುತ್ತದೆ.ಬದುಕು ಎಂದರೆ ಎಲ್ಲದಕ್ಕೂ ಗಮನ ಕೊಡುವುದಲ್ಲ; ಮುಖ್ಯವಾದುದಕ್ಕೆ ಮನಪೂರ್ವಕವಾಗಿ ಗಮನ ನೀಡುವುದೂ ಹೌದು.ನಿಮ್ಮ ಗಮನದ ತಟ್ಟೆಯಲ್ಲಿ ಯಾವುದಕ್ಕೆ ಜಾಗ ನೀಡಬೇಕು ಎಂಬುದನ್ನು ಒಮ್ಮೆ ಯೋಚಿಸೋಣ.The Simplified Scholar — Big Ideas. Made Simple.

Oct 18, 2026

17 min

Oct 11, 2026

12 min

Have you ever been so absorbed in something that you completely forgot about time?
Perhaps you were reading a fascinating book, creating something with your hands, solving a challenging problem, or simply doing something you deeply enjoy. You looked at the clock, only to discover that an hour had passed like a few fleeting minutes.
What happens to us in those moments?
Psychologists call this beautiful state of deep absorption Flow — a state in which our attention becomes so completely immersed in an activity that the noise of the world seems to fade away.
In this episode, we explore the science and simplicity of Flow: why it happens, how the right balance between challenge and skill draws us into it, and how we can invite more of these meaningful moments into our everyday lives.
We also discover how Flow connects with the Japanese philosophy of Ikigai — finding meaning and purpose in the things we do.
You don't need to escape your everyday life to experience something extraordinary. Sometimes, all you need is to give one meaningful activity your undivided attention.
The Simplified Scholar — Big Ideas. Made Simple.
Listen, reflect, and discover the extraordinary hidden within the ordinary.

Oct 11, 2026

12 min

Oct 11, 2026

11 min

ನೀವು ಯಾವುದಾದರೂ ಕೆಲಸದಲ್ಲಿ ಎಷ್ಟು ತಲ್ಲೀನರಾಗಿದ್ದೀರೆಂದರೆ, ಸಮಯ ಕಳೆಯುತ್ತಿರುವುದೇ ನಿಮಗೆ ತಿಳಿಯದ ಕ್ಷಣಗಳನ್ನು ಎಂದಾದರೂ ಅನುಭವಿಸಿದ್ದೀರಾ?
ಮನಸ್ಸಿಗೆ ಮೆಚ್ಚಿನ ಪುಸ್ತಕವನ್ನು ಓದುತ್ತಿರಬಹುದು, ಏನನ್ನಾದರೂ ಸೃಷ್ಟಿಸುತ್ತಿರಬಹುದು, ಒಂದು ಸವಾಲಿನ ಸಮಸ್ಯೆಗೆ ಪರಿಹಾರ ಹುಡುಕುತ್ತಿರಬಹುದು… ಹೀಗೆ ಯಾವುದೋ ಒಂದು ಕೆಲಸದಲ್ಲಿ ಸಂಪೂರ್ಣವಾಗಿ ಮುಳುಗಿರುವಾಗ, ಗಡಿಯಾರದ ಮುಳ್ಳುಗಳು ಚಲಿಸುತ್ತಿದ್ದರೂ ನಮ್ಮ ಅರಿವಿಗೆ ಬರುವುದು ತಡವಾಗುತ್ತದೆ.
ಅಂತಹ ಕ್ಷಣಗಳಲ್ಲಿ ನಮ್ಮ ಮನಸ್ಸಿನಲ್ಲಿ ಏನಾಗುತ್ತಿರುತ್ತದೆ?
ಮನೋವಿಜ್ಞಾನದಲ್ಲಿ ಈ ಸ್ಥಿತಿಯನ್ನು ‘ಪ್ರವಾಹ ಸ್ಥಿತಿ’ (Flow) ಎಂದು ಕರೆಯುತ್ತಾರೆ. ನಾವು ಮಾಡುತ್ತಿರುವ ಕೆಲಸದಲ್ಲಿ ಮನಸ್ಸು ಸಂಪೂರ್ಣವಾಗಿ ಒಂದಾಗುವಾಗ, ಹೊರಗಿನ ಗದ್ದಲವೂ ಮನದೊಳಗಿನ ಚಂಚಲತೆಯೂ ನಿಧಾನವಾಗಿ ಮರೆಯಾಗುತ್ತವೆ. ಉಳಿಯುವುದು ಆ ಕ್ಷಣ, ಆ ಕೆಲಸ, ಮತ್ತು ಅದರಲ್ಲಿ ತೊಡಗಿರುವ ನಮ್ಮ ಸಂಪೂರ್ಣ ಅಸ್ತಿತ್ವ.
ಈ ಸಂಚಿಕೆಯಲ್ಲಿ, ಪ್ರವಾಹ ಸ್ಥಿತಿಯ ಹಿಂದಿರುವ ಮನೋವಿಜ್ಞಾನವನ್ನು ಸರಳವಾಗಿ ಅರಿಯೋಣ. ನಮ್ಮ ಸಾಮರ್ಥ್ಯಕ್ಕೆ ಸವಾಲೊಡ್ಡುವ, ಆದರೆ ನಮ್ಮನ್ನು ಕುಗ್ಗಿಸದ ಕೆಲಸಗಳು ಹೇಗೆ ನಮ್ಮನ್ನು ಆಳವಾದ ತಲ್ಲೀನತೆಯತ್ತ ಕರೆದೊಯ್ಯುತ್ತವೆ ಎಂಬುದನ್ನು ತಿಳಿಯೋಣ.
ಜೊತೆಗೆ, ನಾವು ಮಾಡುವ ಕೆಲಸಗಳಲ್ಲಿ ಅರ್ಥವನ್ನೂ ಸಂತೋಷವನ್ನೂ ಕಂಡುಕೊಳ್ಳುವ ಜಪಾನಿನ ‘ಇಕಿಗೈ’ (Ikigai) ತತ್ತ್ವದೊಂದಿಗೆ ಈ ಅನುಭವಕ್ಕಿರುವ ಸುಂದರ ಸಂಬಂಧವನ್ನೂ ಅನ್ವೇಷಿಸೋಣ.
ಇದಕ್ಕಾಗಿ ಬದುಕಿನಿಂದ ದೂರ ಹೋಗಬೇಕಿಲ್ಲ. ಕೆಲವೊಮ್ಮೆ, ನಾವು ಮಾಡುತ್ತಿರುವ ಒಂದು ಅರ್ಥಪೂರ್ಣ ಕೆಲಸಕ್ಕೆ ನಮ್ಮ ಸಂಪೂರ್ಣ ಗಮನವನ್ನು ನೀಡಿದರೆ ಸಾಕು.
ಕೆಲವು ಕ್ಷಣಗಳಲ್ಲಿ ಅಷ್ಟು ಆಳವಾಗಿ ಬದುಕುವುದು — ಕಾಲವನ್ನೇ ಎಣಿಸುವುದನ್ನು ಮರೆತುಬಿಡುವಷ್ಟು!
ದಿ ಸಿಂಪ್ಲಿಫೈಡ್ ಸ್ಕಾಲರ್ — ದೊಡ್ಡ ವಿಚಾರಗಳು, ಸರಳವಾಗಿ.
ಆಲಿಸಿ, ಆಲೋಚಿಸಿ, ಸಾಮಾನ್ಯ ಕ್ಷಣಗಳೊಳಗೆ ಅಡಗಿರುವ ಅಸಾಮಾನ್ಯತೆಯನ್ನು ಕಂಡುಕೊಳ್ಳಿ.

Oct 11, 2026

11 min

Oct 4, 2026

11 min

ನಮ್ಮ ಬದುಕು ಬದಲಾಗಬೇಕೆಂದರೆ, ಯಾವುದೋ ಒಂದು ದೊಡ್ಡ ನಿರ್ಧಾರ ಬೇಕು, ಮಹತ್ತರವಾದ ಹೆಜ್ಜೆಯೊಂದು ಬೇಕು, ಅಥವಾ ಜೀವನವನ್ನೇ ಬದಲಿಸಿಬಿಡುವಂತಹ ಒಂದು ಹೊಸ ಆರಂಭ ಬೇಕು ಎಂದು ನಾವು ಅನೇಕ ಬಾರಿ ಭಾವಿಸುತ್ತೇವೆ.
ಆದರೆ, ಬಹುಶಃ ಸುಂದರವಾದ ಬದುಕು ದೊಡ್ಡ ಕ್ಷಣಗಳಲ್ಲಿ ನಿರ್ಮಾಣವಾಗುವುದಿಲ್ಲ.
ಅದು ನಿಶ್ಶಬ್ದವಾಗಿ, ನಮಗೆ ಅರಿವಾಗದ ರೀತಿಯಲ್ಲಿ, ಪ್ರತಿದಿನದ ಒಂದೊಂದು ಸಣ್ಣ ಕ್ಷಣದಿಂದ ಹೆಣೆಯಲ್ಪಡುತ್ತಿರಬಹುದು.
ದಿ ಸಿಂಪ್ಲಿಫೈಡ್ ಸ್ಕಾಲರ್ನ ಈ ಸಂಚಿಕೆಯಲ್ಲಿ, Ikigaiಯ ಲೋಕದೊಳಗೆ ಮತ್ತಷ್ಟು ಆಳವಾಗಿ ಹೆಜ್ಜೆಯಿಟ್ಟು, ನಮ್ಮ ದಿನಗಳನ್ನು ಅರ್ಥಪೂರ್ಣವಾಗಿಸುವ ಆ ಸಣ್ಣ ಸಣ್ಣ ಸಂಗತಿಗಳ ಮೌನಶಕ್ತಿಯನ್ನು ಅರಿಯುವ ಪ್ರಯತ್ನ ಮಾಡೋಣ.
ಬೆಳಗಿನ ಒಂದು ನಡಿಗೆ.ಮನಸ್ಸಿಗೆ ಮುದ ನೀಡುವ ಒಂದು ಆತ್ಮೀಯ ಮಾತುಕತೆ.ಹೃದಯಕ್ಕೆ ಹತ್ತಿರವಾದ ಒಂದು ಹಾಡು.ಅವಸರವಿಲ್ಲದೆ ಸವಿಯುವ ಒಂದು ಊಟ.ಸಮಯದ ಅರಿವನ್ನೇ ಮರೆಸುವ ಒಂದು ಹವ್ಯಾಸ.ಯಾರಿಗಾದರೂ ಮಾಡುವ ಒಂದು ಸಣ್ಣ ಸಹಾಯ.ಅಥವಾ, ನಾಳೆಯನ್ನು ಎದುರುನೋಡುವಂತೆ ಮಾಡುವ ಒಂದು ಪುಟ್ಟ ಕಾರಣ.
ಇವುಗಳಲ್ಲಿ ಯಾವುದೂ ಪ್ರತ್ಯೇಕವಾಗಿ ನೋಡಿದಾಗ ಅಸಾಧಾರಣವೆನಿಸದೇ ಇರಬಹುದು.
ಆದರೆ, ವರ್ಷಗಳು ಉರುಳಿದಂತೆ ಇಂತಹ ಕ್ಷಣಗಳೆಲ್ಲ ಒಂದರೊಡನೊಂದು ಬೆರೆತು, ನಮ್ಮ ಬದುಕಿನ ಅರ್ಥವನ್ನೂ, ನೆನಪುಗಳನ್ನೂ, ಸಂತೋಷವನ್ನೂ ಹೆಣೆಯುವ ಸುಂದರ ಬಟ್ಟೆಯಾಗುತ್ತವೆ.
ಬಹುಶಃ ಸಂತೋಷವೆಂಬುದು ನಾವು ದೂರದಲ್ಲಿ ಹುಡುಕಬೇಕಾದ ಯಾವುದೋ ವಸ್ತುವಲ್ಲ.
ನಮ್ಮ ಪ್ರತಿದಿನದ ಬದುಕಿನ ಸಣ್ಣ ಸಣ್ಣ ಮೂಲೆಗಳಲ್ಲಿ ಅದು ಈಗಾಗಲೇ ಮೌನವಾಗಿ ಚದುರಿಕೊಂಡಿರಬಹುದು —ನಾವು ಅದನ್ನು ಗಮನಿಸುವುದಕ್ಕಾಗಿ ಮಾತ್ರ ಕಾಯುತ್ತಿರಬಹುದು.
ಹಾಗಾದರೆ, ಈ ಸಂಚಿಕೆಯಲ್ಲಿ ಸ್ವಲ್ಪ ನಿಧಾನವಾಗಿ ನಡೆಯೋಣ.ಸ್ವಲ್ಪ ಹತ್ತಿರದಿಂದ ನಮ್ಮ ಬದುಕನ್ನು ನೋಡೋಣ.ಸಾಮಾನ್ಯವೆಂದು ನಾವು ದಾಟಿಹೋಗುವ ಕ್ಷಣಗಳೊಳಗೆ ಅಡಗಿರುವ ಅಸಾಮಾನ್ಯ ಸೌಂದರ್ಯವನ್ನು ಮತ್ತೊಮ್ಮೆ ಕಂಡುಕೊಳ್ಳೋಣ.
ದೊಡ್ಡ ವಿಚಾರಗಳು. ಸರಳವಾಗಿ.

Oct 4, 2026

11 min

Oct 4, 2026

8 min

We often dream of changing our lives through grand gestures — a bold decision, a new beginning, or a dramatic transformation.
But perhaps a beautiful life is not built in moments of grandeur.
Perhaps it is woven quietly, one ordinary moment at a time.
In this episode of The Simplified Scholar, we journey deeper into the world of Ikigai and explore the quiet power of the little things that fill our days.
A morning walk.A conversation that warms the heart.A favourite song.A meal enjoyed without hurry.A hobby that makes us lose track of time.A small act of kindness.Something, however simple, that gives us a reason to look forward to tomorrow.
None of these moments may seem extraordinary. Yet, gathered together over the years, they can become the very fabric of a meaningful life.
Perhaps happiness is not always something we need to search for.
Perhaps it is already scattered gently through our everyday lives — waiting for us to notice.
So, in this episode, let us pause, look a little closer, and rediscover the extraordinary beauty hidden within the ordinary.
Big Ideas. Made Simple.

Oct 4, 2026

8 min

Sep 27, 2026

11 min

ನಮ್ಮ ಬದುಕಿನಲ್ಲಿ ಅರ್ಥಪೂರ್ಣವಾದ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದೇ ನಮ್ಮ ಸಂತೋಷಕ್ಕೆ ಒಂದು ಕಾರಣವಾಗಬಹುದೇ?
The Simplified Scholarನ ಈ ಸಂಚಿಕೆಯಲ್ಲಿ, Ikigai: The Japanese Secret to a Long and Happy Life ಕೃತಿಯ ನಮ್ಮ ಪಯಣವನ್ನು ಮುಂದುವರಿಸುತ್ತಾ, ಸದಾ ಚಟುವಟಿಕೆಯಿಂದಿರುವುದು, ಬದುಕಿಗೆ ಒಂದು ಉದ್ದೇಶವಿರುವುದು ಮತ್ತು ಪ್ರತಿದಿನದ ಬದುಕಿನೊಂದಿಗೆ ಅರ್ಥಪೂರ್ಣವಾಗಿ ಬೆಸೆದುಕೊಂಡಿರುವುದರ ಮಹತ್ವವನ್ನು ಅರಿಯೋಣ.
‘Busy’ ಎಂದರೆ ಪ್ರತಿಕ್ಷಣವೂ ಕೆಲಸದಲ್ಲಿ ಮುಳುಗಿರುವುದಲ್ಲ. ಬದಲಾಗಿ, ಪ್ರತಿದಿನ ಬೆಳಿಗ್ಗೆ ನಮ್ಮನ್ನು ಎಬ್ಬಿಸುವಂತಹ ಒಂದು ಕಾರಣವಿರುವುದು — ನಮ್ಮ ದಿನಗಳಿಗೆ ಅರ್ಥವನ್ನು ನೀಡುವ, ನಮ್ಮನ್ನು ಬದುಕಿನೊಂದಿಗೆ ಸಕ್ರಿಯವಾಗಿ ಜೋಡಿಸುವ ಯಾವುದೋ ಒಂದು ಉದ್ದೇಶವಿರುವುದು.
ಸರಳ ಉದಾಹರಣೆಗಳು, ಸಣ್ಣ ಕಥೆಗಳು ಮತ್ತು ಚಿಂತನೆಗಳ ಮೂಲಕ, ಅರ್ಥಪೂರ್ಣವಾದ ಚಟುವಟಿಕೆಗಳು ಹೇಗೆ ನಮ್ಮ ಬದುಕನ್ನು ಹೆಚ್ಚು ಸಂತೋಷಕರವಾಗಿಯೂ ಪರಿಪೂರ್ಣವಾಗಿಯೂ ಮಾಡಬಲ್ಲವು ಎಂಬುದನ್ನು ನೋಡೋಣ.
🎙️ The Simplified Scholar — Big Ideas. Made Simple.
📖 Ikigai: The Japanese Secret to a Long and Happy Life — Héctor García ಮತ್ತು Francesc Miralles ಅವರ ಕೃತಿಯನ್ನು ಆಧರಿಸಿ.

Sep 27, 2026

11 min

Sep 27, 2026

8 min

Why do some people seem to find happiness simply by being engaged in meaningful things?
In this episode of The Simplified Scholar, we continue our journey through Ikigai: The Japanese Secret to a Long and Happy Life and explore the idea of finding joy in staying active, purposeful, and connected to everyday life.
Being busy is not about filling every moment with work. It is about having reasons to get up each morning — something that gives our days meaning and keeps us engaged with life.
Through simple examples, stories, and reflections, we explore how purposeful activity can contribute to a happier and more fulfilling life.
🎙️ The Simplified Scholar — Big Ideas. Made Simple.
📖 Based on Ikigai: The Japanese Secret to a Long and Happy Life by Héctor García and Francesc Miralles.

Sep 27, 2026

8 min

Sep 20, 2026

8 min

ನಮ್ಮ ಜೀವನಕ್ಕೆ ಅರ್ಥ ಕೊಡುವುದು ಏನು? ಪ್ರತಿದಿನ ಬೆಳಿಗ್ಗೆ ಎದ್ದು, ಜೀವನವನ್ನು ಮುಂದುವರಿಸಬೇಕು ಎಂಬ ಭಾವನೆ ನಮಗೆ ಎಲ್ಲಿಂದ ಬರುತ್ತದೆ?
The Simplified Scholarನ ಮೊದಲ ಮುಖ್ಯ ಸಂಚಿಕೆಯಲ್ಲಿ, ನಾವು Ikigai ಎಂಬ ಆಕರ್ಷಕ ಜಪಾನಿನ ಪರಿಕಲ್ಪನೆಯೊಂದಿಗೆ ನಮ್ಮ ಪ್ರಯಾಣವನ್ನು ಆರಂಭಿಸುತ್ತೇವೆ.
ಸಾಮಾನ್ಯವಾಗಿ Ikigai ಎಂದರೆ ಜೀವನಕ್ಕೆ ಒಂದು ಕಾರಣ, ಬದುಕಲು ಒಂದು ಅರ್ಥ, ಅಥವಾ ಪ್ರತಿದಿನ ಬೆಳಿಗ್ಗೆ ಎದ್ದು ಮುಂದುವರಿಯಲು ಪ್ರೇರೇಪಿಸುವ ಕಾರಣ ಎಂದು ಹೇಳಲಾಗುತ್ತದೆ.
ಆದರೆ Ikigai ಎಂದರೆ ಜೀವನದ ಒಂದೇ ಒಂದು ದೊಡ್ಡ ಗುರಿಯನ್ನು ಕಂಡುಕೊಳ್ಳುವುದೇ?
ಈ ಸಂಚಿಕೆಯಲ್ಲಿ, Ikigai ಎಂದರೇನು ಎಂಬುದನ್ನು ಸರಳವಾಗಿ ಅರ್ಥಮಾಡಿಕೊಳ್ಳೋಣ. ನಮ್ಮ ಜೀವನದ ಉದ್ದೇಶ, ಸಂತೋಷ, ಕೆಲಸ, ಸಂಬಂಧಗಳು ಮತ್ತು ದಿನನಿತ್ಯದ ಬದುಕನ್ನು ನಾವು ಹೇಗೆ ನೋಡುತ್ತೇವೆ ಎಂಬುದರ ಬಗ್ಗೆ ಹೊಸದಾಗಿ ಯೋಚಿಸೋಣ.
ದೊಡ್ಡ ವಿಚಾರಗಳು. ಸರಳ ಮಾತುಗಳು. ಯಾವುದೇ ಕಠಿಣ ಪದಗಳಿಲ್ಲ.
🎙️ The Simplified Scholar — Big Ideas. Made Simple.
ನಿರೂಪಣೆ: Dr Brian Fernandes, Physicist and Educator

Sep 20, 2026

8 min